ಶುಕ್ರವಾರ, ಫೆಬ್ರವರಿ 5, 2010

ಏನ್.ಎಸ್.ಎಸ್.ಶಿಬಿರದಲ್ಲೊಂದು ಯಕ್ಷಗಾನ ಪ್ರಾತ್ಯಕ್ಷಿಕೆ :ಒಂದು ಟಿಪ್ಪಣಿ

ಯಕ್ಷಗಾನ ಸರ್ವಾಂಗಸುಂದರ ಕಲೆ.ಊರ ಜಾತ್ರೆಗಳ ದಿನಗಳಲ್ಲಿ ರಾತ್ರಿಯಿಡೀ ಯಕ್ಷಗಾನ ನೋಡಿ,ಮರುದಿನ ಹಗಲು ಮಲಗಿ ನಿದ್ರಿಸುವಾಗಲೂ ಕಿವಿ ತುಂಬಾ ಚೆಂಡೆಯ ಬಡಿತ,ಕಣ್ಣು ತುಂಬಾ ಬಣ್ಣಗಳ ಕುಣಿತ.ನಂತರ ಕಲಿತ ಕಾಲೇಜಿನಲ್ಲಿ ವಿ.ವಿ.ಸ್ಪರ್ಧೆಗಾಗಿ ,ಮತ್ತೆ ಒಂದೆರಡು ಪ್ರದರ್ಶನಗಳಿಗಾಗಿ ಬಣ್ಣ ಹಚ್ಚಿ ಬೀಗಿದ್ದೂ ಇದೆ.ಹಾಗಿದ್ದರೂ ಯಕ್ಷಗಾನ ಕಲೆಯ ಕುರಿತಾದ ,ಅದರ ಆಸ್ವಾದನೆಗೆ ಅತೀ ಅಗತ್ಯವಾದ ಕಲೆಯ ಸೂಕ್ಶ್ಮ ವಿವರಗಳ ಬಗೆಗಿನ ಅರಿವು ನೀಡಿದ್ದು ಕಳೆದ ಡಿಸೆಂಬರ್ ತಿಂಗಳಲ್ಲಿ ನಲಂದಾ ಕಾಲೇಜಿನಲ್ಲಿ ನಡೆದ ಕಾಸರಗೋಡ್ ಸರಕಾರೀ ಕಾಲೇಜಿನ ಎನ್.ಎಸ್.ಎಸ್.ದ್ವಿದಿನ ವಿಶೇಷ ಶಿಬಿರವಾಗಿತ್ತು.


ಗಡ್ಕರೆ ವಿಶ್ವನಾಥ ಹಾಗು ಶಿವಶಂಕರದಿವಾನ ಅವರು ನಡೆಸಿಕೊಟ್ಟ ಕಾರ್ಯಕ್ರಮದಲ್ಲಿ ಕಾಸರಗೋಡಿನ ಹಲವು ಕಲಾಪ್ರೇಮಿಗಳ,ಗಣ್ಯರ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅದ್ಯಕ್ಷರಾದ ಕುಂಬಳೆ ಸುಂದರರಾವ್ ಅವರು ಉಪಸ್ಥಿತರಿದ್ದುದು ಕಾರ್ಯಕ್ರಮಕ್ಕೆ ಗೌರವ ತಂದುಕೊಟ್ಟಿತ್ತು. ಕಾಸರಗೋಡಿನ ಎನ್.ಎಸ್.ಎಸ್. ಘಟಕದ ಯೋಜನಾಧಿಕಾರಿಗಳಲ್ಲಿ ಒಬ್ಬರೂ ,ಜೊತೆಗೆ ಕಾಸರಗೋಡಿನಲ್ಲಿ ಹಲವಾರು ಉತ್ತಮ ಹಾಗು ಉಪಯುಕ್ತ ಯಶಸ್ವೀ ಕಾರ್ಯಕ್ರಮಗಳನ್ನು ಆಯೋಜಿಸಿದ ಕಾಸರಗೋಡು ಸರಕಾರೀ ಕಾಲೇಜಿನ ಕನ್ನಡ ಉಪನ್ಯಾಸಕ ಶ್ರೀ. ರತ್ನಾಕರ ಮಲ್ಲಮೂಲೆ ಅವರು ಕಾರ್ಯಕ್ರಮಕ್ಕೆ ಸಾರಥ್ಯ ನೀಡಿದ್ದರು.


ಪಂಚಹಸ್ತೇನ ವಿಸ್ತೀರ್ಣಂ ದಶ ಹಸ್ತೇನಉನ್ನತಂ' ಎಂದು ರಂಗಸ್ಥಳದ ರಚನೆಯ ಕುರಿತಾದ ಪ್ರಾತ್ಯಕ್ಷಿಕೆಯೊಂದಿಗೆ ಅತ್ಯಂತ ಕ್ರಿಯಾತ್ಮಕವಾಗಿ ಆರಂಭಗೊಂಡಿತು ಕಾರ್ಯಕ್ರಮ.ಐದು ಹಸ್ತದ ವಿಸ್ತೀರ್ಣವುಳ್ಳ ರಂಗಸ್ಥಳವನ್ನು ಐದು ಕಾಲ್ಪನಿಕ ಭಾಗಳನ್ನಾಗಿ ವಿಭಾಗಿಸಿ ಬಯಲಾಟ ನಡೆಯುತ್ತದೆ.ರಂಗಸ್ಥಳದ ಅತ್ಯಂತ ಎದುರಿನ ಭಾಗವನ್ನು ರಂಗಶಿರ್ಷವೆಂದು ಕರೆಯುತ್ತಾರೆ.ಒಂದು ಹಸ್ತದ ಉದ್ದ ಮತ್ತು ಐದು ಹಸ್ತದ ಅಗಲವಿರುವ ಇದರಲ್ಲಿ ಪುಉರ್ವರಂಗ ನಡೆಯುತ್ತದೆ.ಒಡ್ಡೋಲಗ,ಅರ್ದನಾರೀಶ್ವರ ನೃತ್ಯ ,ಚಂದ್ರಭಾಮಾ ನೃತ್ಯ ,ನಿತ್ಯವೇಶ ನೃತ್ಯ ಇತ್ಯಾದಿ ನೃತ್ಯಗಳ ಮೂಲಕ ವಿವಿದ ವೇಷಧಾರಿಗಳು ಬಂದು ಇಲ್ಲಿ ದೇವರನ್ನು ಆವಾಹಿಸಿ ಕುತುಕೊಲ್ಲಿಸಿ ಹೋಗುತ್ತಾರೆ.ನಂತರ ಈ ಭಾಗದಲ್ಲಿ ನೃತ್ಯಕ್ಕೆ ಅವಕಾಶವಿಲ್ಲ.ಇಲ್ಲಿ ನಿಂತು ಪಾತ್ರಗಳು ಮಾತನದುದಿದ್ದರೆ ಚಲನೆಯಿರಬಾರದು. ರಂಗಶೀರ್ಷದ್ ನಂತರದ ೨ಹಸ್ತದ ಉದ್ದ ಹಾಗು ೫ ಹಸ್ತದ ಅಗಲದ ೨ ಭಾಗಗಳು ಕ್ರೀದನೀಯಕ ಸ್ಥಾನ.ಕ್ರೀದನೀಯಕದಲ್ಲಿ ಪಾತ್ರಗಳು ಮಾತನಾದುವುದಿದ್ದರೆ ಚಲಿಸುತ್ತಲೀ ಇರಬೀಕೆಮ್ಬುದು ನಿಯಮ.ನಂತರದ್ದು ಎಡ ಮತ್ತು ಬಲ ಭಾಗ.ಯಾವುದೀ ಒಂದು ಪದ್ಯ ಆರಂಭವಾಗುವುದೂ ಮುಕ್ತಾಯವಾಗುವುದೂ ಬಲ ಭಾಗದಲ್ಲಿ.ಈಲ್ಲಿ ಮಾತನಾಡುವಾಗ ಚಲನೆಯಿರಬಾರದು.ಇದು ರಂಗಧರ್ಮ.ಕೊನೆಯ ಭಾಗ ರಂಗ ಪೀಠ.ಭಾವಾಭಿನಯ ಹಾಗು ಸ್ತಬ್ದಾಭಿನಯವನ್ನು ರಂಗ ಪೀಠದಲ್ಲಿ ಅಭಿನಯಿಸಬೇಕು.ಇಲ್ಲಿ ಕುಳಿತು ಮಾತನಾಡುವಂತಿಲ್ಲ.


ಆ ಬಳಿಕ ಪ್ರವೇಶ ವೈವಿಧ್ಯವನ್ನೂ ಅಭಿನಯಿಸಿ ತೋರಿಸಿದರು.ತೆರೆಗೆ ಆತುಕೊಂಡೇ ಕಲಾವಿದ ಕುಣಿವ ತೆರೆ ಕಲಸು ನೃತ್ಯ ಇಂದು ತೆರೆ ಕ್ಲಾಸು ಆದ ಬಗೆಯನ್ನು ವಿವರಿಸಿದಾಗ ನಗೆಯುಕ್ಕಿತು.ರಂಗಸ್ಥಳದ ರಚನೆಗನುಗುಣವಾಗಿ ಪ್ರತಿ ಕ್ರಿಯೆಗೂ ೩ ಆವರ್ತನವಿರಬೇಕು,ವೇಷದಿಂದ ವೇಷಕ್ಕೆ ಪ್ರವೇಶದಿಂದ ತೊಡಗಿ ಅಭಿವ್ಯಕ್ತಿಯವರೆಗೆ ವೈವಿಧ್ಯವಿದೆ.ಇದನ್ನೆಲ್ಲಾ ಅಡ್ಯನ ಮಾಡಿಕೊಂಡು ಬೆಳೆದ ಕಲಾವಿದ ಬೆಳೆಯುತ್ತಾನೆ.ಕಲೆ ಉಳಿಯುತ್ತ್ತದೆ ,ಎಂದ ಮಾತು ನಿಜಕ್ಕೂ ಸತ್ಯ.ಇ೦ತಹ ಒಂದು ಅಪರೂಪದ ಅಭೂತಪೂರ್ವ ಕಾರ್ಯಕ್ರಮವನ್ನು ಎನ್.ಎಸ್.ಎಸ್.ಶಿಬಿರದಲ್ಲೂ ಆಯೋಜಿಸಿದ ರತ್ನಾಕರ ಮಲ್ಲಮೂಲೆಯವರು ನಿಜಕ್ಕೂ ಅಭಿನಂದನಾರ್ಹರು.



ಕನ್ನಡ ಎನೆ ಕುಣಿದಾಡುವುದೆನ್ನೆದೆ
ಕನ್ನಡ ಎನೆ ಕಿವಿ ನಿಮಿರುವುದು
ಮಂ. ಗೋವಿಂದಪೈ ಗಳು ಹೇಳಿದ ಮಾತುಗಳು.


ಹಲವಾರು ಭಾಷೆ,ಸಂಸ್ಕೃತಿಗಳ ಸಂಗಮ ಭೂಮಿಯಾದ ಕಾಸರಗೋಡಿನಲ್ಲಿ
ಪ್ರತಿ ದಿನ ಕನ್ನಡದ ಕಂಪನ್ನು ಉಸಿರಾಡುತ್ತಾ ಕನ್ನಡಮ್ಮನ ಮನೆಯ ಕಾರ್ಯಕ್ರಮಗಳಲ್ಲಿ ದಿನವೂ ಪಾಲ್ಗೊಳ್ಳುವ ಭಾಗ್ಯವಂತರು ನಾವು ಎನ್ನುದು ಧನಾತ್ಮಕ ಚಿಂತನೆಯಾದರೆ ,ಭಾಷೆಗಲೊಡನೆ ಅಸ್ತಿತ್ವಕ್ಕಾಗಿ ಹೋರಾಡುತ್ತಾ,ಕರ್ನಾಟಕದಿಂದ ಬೇರ್ಪಟ್ಟ ದುಃಖದ ಬೆಂಕಿಯಲ್ಲಿ ದಿನವೂ ಬೀಯುತ್ತಿರುವ ದುರ್ದೈವಿಗಳು ನಾವೆನ್ನಬೇಕೆ?