ಗುರುವಾರ, ಫೆಬ್ರವರಿ 4, 2010

ಸತ್ಯ

ಮೋಡ ಕವಿದ ಬಾನಿನಲ್ಲಿ ಕತ್ತಲಾದ ಭೂಮಿಯಲ್ಲಿ
ಹೊಳೆದು ಬರುವ ಮಿಂಚಿನಂತೆ ನಿನ್ನ ದರ್ಶನ
ರವಿಯು ಜಾರೋ ಸಮಯದಲ್ಲಿ ಶಶಿಯ ಉದಯ ಕಾಲದಲ್ಲಿ
ಭೋರ್ಗರೆಯುವ ಮನಸಿನಂತೆ ಮನದ ಮರ್ದನ

ನೆಟ್ಟ ನೋಟ ಚುಚ್ಚಿದಾಗ ಬಿಟ್ಟ ಗುರಿಯು ತಲುಪಿದಾಗ ಜಗದಲೆಲ್ಲ
ನೀನೆ ಇರಲು ಎತ್ತ ಅಡಗಲಿ
ಮಳೆಯು ಬಿಟ್ಟ ಬಾನಿನಂತೆ ತೊಳೆದು ಇಟ್ಟ ಮುತ್ತಿನಂತೆ
ಕೈ ಚಾಚೋ ನಿನ್ನ ಬಿಟ್ಟು ಹೇಗೆ ಹೋಗಲಿ?





ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ